image

Blessing of Vehicles at Shamboor | ಶಂಭೂರಿನಲ್ಲಿ ವಾಹನಗಳ ಆಶೀರ್ವಾದ

ಅಕ್ಟೋಬರ್ 4ರಂದು, ಭಾನುವಾರದ ಪವಿತ್ರ ಬಲಿಪೂಜೆಯ ನಂತರ ಕಥೊಲಿಕ್ ಸಭಾ ಶಂಭೂರು ವತಿಯಿಂದ ವಾಹನಗಳ ಆಶೀರ್ವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪ್ಯಾರಿಷ್ ಸದಸ್ಯರು ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ ಚರ್ಚಿನ ಆವರಣದಲ್ಲಿ ಶಿಸ್ತಿನಿಂದ ಸಾಲಾಗಿ ನಿಲ್ಲಿಸಿದ್ದರು.


ಕಾರ್ಯಕ್ರಮವನ್ನು ಇಗ್ನೇಷಿಯಸ್ ವೇಗಸ್ ಅವರು ನಿರ್ವಹಿಸಿ, ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಬಳಿಕ ನಮ್ಮ ಚರ್ಚಿನ ಧರ್ಮಗುರು ರೆ. ಫಾ. ಸಂತೋಷ್ ಡಿಸೋಜಾ ಅವರು ಪ್ರಾರ್ಥನೆ ಸಲ್ಲಿಸಿ, ಎಲ್ಲಾ ವಾಹನಗಳಿಗೆ ಆಶೀರ್ವಾದ ನೀಡಿ, ವಾಹನ ಸವಾರರಿಗೆ ಸುರಕ್ಷಿತ ಪ್ರಯಾಣ ಹಾಗೂ ದೇವರ ರಕ್ಷಣೆಯನ್ನು ಕೋರಿದರು.

ಕಾರ್ಯಕ್ರಮದ ಅಂಗವಾಗಿ ಕ್ಯಾಥೋಲಿಕ್ ಸಭಾ ವತಿಯಿಂದ ಎರಡು ಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಲಕ್ಕಿ ಡ್ರಾ ಆಯೋಜಿಸಲಾಗಿತ್ತು. ಭಾಗವಹಿಸಿದ ಎಲ್ಲಾ ವಾಹನಗಳ ಸಂಖ್ಯೆಯನ್ನು ಸಂಗ್ರಹಿಸಿ, ಎರಡು ಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಪ್ರತ್ಯೇಕ ಪೆಟ್ಟಿಗೆಗಳಲ್ಲಿ ಹಾಕಲಾಗಿತ್ತು.

ಎರಡು ಚಕ್ರ ವಾಹನದ ಲಕ್ಕಿ ಡ್ರಾವನ್ನು ರೆ. ಫಾ. ಸಂತೋಷ್ ಡಿಸೋಜಾ ಅವರು ನಡೆಸಿದರು. ಸಂತ ಸೆಬಾಸ್ಟಿಯನ್ ವಾರ್ಡ್‌ನ ವಿಜಯ್ ಪಿಂಟೋ ಅವರ ವಾಹನ ಅದೃಷ್ಟಶಾಲಿಯಾಗಿ ಆಯ್ಕೆಯಾಯಿತು. ನಂತರ ಚರ್ಚಿನ ಪಾಲಾನ ಮಂಡಲಿಯಾ ಉಪಧ್ಯಾಕ್ಷ ರಾದ ಗೋಡ್ ಫ್ರೀ ಪಾಶನ್ ಅವರು ನಾಲ್ಕು ಚಕ್ರ ವಾಹನದ ಲಕ್ಕಿ ಡ್ರಾ ನಡೆಸಿದರು. ಸಂತ ಅಂತೋನಿ ವಾರ್ಡ್‌ನ ಗಿಲ್ಬರ್ಟ್ ಕ್ರಾಸ್ಟಾ ಅವರ ವಾಹನ ವಿಜೇತವಾಯಿತು.


ಕಾರ್ಯಕ್ರಮದ ಕೊನೆಯಲ್ಲಿ ಇಗ್ನೇಷಿಯಸ್ ವೇಗಸ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಹಾಗೂ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಎಲ್ಲಾ ಪ್ಯಾರಿಷ್ ಸದಸ್ಯರಿಗೆ ತಿಂಡಿ ವಿತರಿಸಲಾಯಿತು.


🙏 ಪ್ರಾರ್ಥನೆ, ಆಶೀರ್ವಾದ ಮತ್ತು ಸಂತೋಷದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.


Blessing of Vehicles Held at Shamboor Church


On 4 October, Catholic Sabha Shamboor organized a Blessing of Vehicles after the Sunday Holy Mass. Parishioners brought their vehicles, which were washed and neatly arranged in an orderly manner on the church premises.


The programme was conducted by Ignatius Veigas, who welcomed all those gathered and briefly explained the purpose of the celebration. Our parish priest, Rev. Fr. Santhosh D’Souza, then offered prayers and blessed all the vehicles, seeking God’s protection and safe journeys for all parishioners.

As part of the programme, Catholic Sabha organized a Lucky Draw for two-wheelers and four-wheelers. The registration numbers of all participating vehicles had been collected and placed in separate boxes for the two categories.


Rev. Fr. Santhosh D’Souza picked the lucky two-wheeler draw, and Vijay Pinto from St. Sebastian Ward was declared the winner. The four-wheeler draw was conducted by Godfrey Pashan, Vice President of the Parish Council, with Gilbert Crasta from St. Antony Ward emerging as the lucky winner.

At the end of the programme, Ignatius Veigas thanked all the members who helped organize and coordinate the event in an orderly manner. Snacks were then distributed to all parishioners.


🙏 The programme concluded with prayers, fellowship and wishes for safe journeys and God’s protection for all.


Stay connected with Sacred Heart of Jesus Church, Shamboor:


📸 Instagram: https://www.instagram.com/sacredheartchurchshamboor

📘 Facebook: https://www.facebook.com/sacredheartchurchshamboor

▶️ YouTube: https://www.youtube.com/@ShamboorChurch

© 2026 CATHOLIC CONNECT POWERED BY ATCONLINE LLP